ಡೈನಮೊ (ಜಾದೂಗಾರ) ಡೈನಮೊ ಎಂದೇ ಹೆಸರಾಗಿರುವ ಸ್ಟೀವನ್ ಫ್ರೈನ್ ಒಬ್ಬ ಖ್ಯಾತ ಆಂಗ್ಲ ಜಾದೂಗಾರ. ಇವರು ಜನಿಸಿದ್ದು ೧೯೮೨ ರ ಡಿಸೆಂಬರ್ ೧೭ ರಂದು. ಇಂಗ್ಲೀಷ್ ದೂರದರ್ಶನದಲ್ಲಿ ಪ್ರಸಾರವಾಗುವ 'ಡೈನಮೊ: ಮ್ಯಾಜಿಷಿಯನ್ ಇಂಪಾಸಿಬಲ್' ಎಂಬ ಕಾರ್ಯಕ್ರಮದಿಂದಲೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮ ಜುಲೈ ೨೦೧೧ ರಿಂದ ಸೆಪ್ಟೆಂಬರ್ ೨೦೧೪ ರ ವರೆಗೆ ಪ್ರಸಾರವಾಗುತ್ತಿತ್ತು. == ಆರಂಭಿಕ ದಿನಗಳು == ಫ್ರೈನ್ ಜನಿಸಿದ್ದು ಇಂಗ್ಲೆಂಡ್ ಪಶ್ಚಿಮ ಯಾರ್ಕ್ ಶೈರ್ ನ ಬ್ರಾಡ್ ಫೋರ್ಡ್ ನಲ್ಲಿ. ಇವರ ತಾಯಿ ಇಂಗ್ಲೀಷ್ ಮೂಲದವರೇ ಆದರೆ ತಂದೆ ಪಾಕಿಸ್ತಾನ ಮೂಲದವರು.ಕರುಳು ಸಂಬಂಧಿ ಕಾಯಿಲೆಯೊಂದರಿಂದ ನರಳಿದ ಫ್ರೈನ್ ಜೀವನ ಪರ್ಯಂತ ಸಣ್ಣ ದೇಹವನ್ನು ಹೊಂದಿರುವಂತಾಗಿದೆ. ಇವರೇ ಹೇಳುವ ಪ್ರಕಾರ ಇವರು ಮೊದಲು ಜಾದೂ ಕಲಿತಿದ್ದು ಇವರ ಅಜ್ಜನಿಂದ. == ಮಾಧ್ಯಮಗಳಲ್ಲಿ ಕಾರ್ಯಕ್ರಮಗಳು == ಡೈನಮೊ ಎರಡನೇ ಸರಣಿ ಕಾರ್ಯಕ್ರಮ, 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್'. ಡೈನಮೊ ಮೂರನೇ ಸರಣಿ ಕಾರ್ಯಕ್ರಮ, 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್'. ೨೦೧೩ರ ಜುಲೈ ೧೧ ರಂದು ಪ್ರಸಾರವಾಯಿತು. ೨೦೧೩ರ ಆಗಸ್ಟ್ ೧ ರಂದು ಡೈನಮೊ 'ನಥಿಂಗ್ ಐಸ್ ಇಂಪಾಸಿಬಲ್' ಎನ್ನುವ ತಲೆ ಬರಹವಿರುವ ತಮ್ಮ ಆತ್ಮ ಚರಿತ್ರೆಯನ್ನು ಬಿಡುಗಡೆ ಮಾಡಿದರು. == ಜಾದೂ ಪ್ರಶಸ್ತಿಗಳು == 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್' ಆಂಗ್ಲ ಕಾರ್ಯಕ್ರಮವು 'ಬ್ರಾಡ್ಕ್ಯಾಸ್ಟ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಅತ್ಯುತ್ತಮ ಮನರಂಜನೆ ಕಾರ್ಯಕ್ರಮದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 'ಡೈನಮೊ: ಮ್ಯಾಜಿಷಿಯನ್ ಇಂಪಾಸಿಬಲ್' ಎರಡನೇ ಆವೃತ್ತಿಯೂ ಅತ್ಯತ್ತಮ ಮನರಂಜನೆ ಕಾರ್ಯಕ್ರಮಕ್ಕಾಗಿ ಸತತ ಎರಡನೇ ಬಾರಿಗೆ ವರ್ಜಿನ್ ಮೀಡಿಯಾ ಅವಾರ್ಡ್ ಪಡೆಯಿತು. ಜಾದೂ ಕಲಾ ಅಕಾಡೆಮಿಯ ೪೮ ನೇ ವಾರ್ಷಿಕ ಪ್ರಶಸ್ತಿ ಪ್ರದರ್ಶನದಲ್ಲಿ ವರ್ಷದ ಜಾದೂಗಾರ ಪ್ರಶಸ್ತಿ. == ಉಲ್ಲೇಖಗಳು ==